ಆ ದಿನಗಳು!!!
ನಾನ್ಯಾವ ದಿನಗಳ ಬಗ್ಗೆ ಮಾತಾಡುತ್ತಿರುವೆ ಅಂತ ನಿಮಗೆ ಮೊದಲು ಹೇಳಬೇಕು.. ನಾನು ಮಾತಾಡುತ್ತಿರುವುದು "ಆ" ದಿನಗಳ ಬಗ್ಗೆ, ಮರೆಯಲಾಗದ ದಿನಗಳು.. ಆಹಾ! ಮತ್ತೆ ಜೀವನದಲ್ಲಿ ಬಂದರೆ ತಪ್ಪದೇ ಬಿಗಿದಪ್ಪಿಕೊಳ್ಳುವ ತುಂಟುತನದಿಂದ ಕೂಡಿದ ದಿನಗಳವು "ಆ ದಿನಗಳು". ಮಿತ್ರರೇ, ಈಗಲಾದರೂ ತಿಳಿಯಿತೋ ನಾನ್ಯಾವ ದಿನಗಳ ಬಗ್ಗೆ ಮಾತಾಡುತ್ತಿರುವೆ ಅಂತ! :)
ರಜೆ ಬಂತು ಅಂದರೆ ಮುಗೀತು.. ದಿನವಿಡೀ ಗೊಲಿ, ಬಗುರಿ, ಕ್ರಿಕೇಟು ಆಡಿಕೊಂಡು ಓಡಾಡುತ್ತಿದ್ದೆವು, ಆಟಕ್ಕೇನೂ ಕಡಿಮೆ ಇಲ್ಲ. ಬೇರೆಯವರಿಗೆ ಕುಂಟಿಸುವುದೆಂದರೆ ಪಂಚಪ್ರಾಣ, ಅದರಲ್ಲೂ ಆ "ಕೆಂಚ"ದಾಟ, ಅಬ್ಬಾ! ಬೇಸಿಗೆಗಾಲದ ಇನ್ನೊಂದು ಆಟ "ಗಣಪ್ಪ". ಕಲ್ಲನ್ನು ತ್ರಿಕೋನಾಕಾರದಲ್ಲಿ ತುಂಡು ಮಾಡಿ ಅದನ್ನು ಬೀಳಿಸಿ ಆದುವಾಟ. ನಾವೂ ಕೂಡ ಈಗ ಆಡುವ international players ಇವರಂತೆ 2 ಗಂಟೆಗೊಮ್ಮೆ ಮನೆಗೆ ನುಗ್ಗಿ ಬ್ರೇಕ್ ತೆಗೆದುಕೊಳ್ಳುತ್ತಿದ್ದೆವು. ಗಟ-ಗಟನೆ ನೀರು ಕೂಡಿದರೆ ಅಮ್ಮ ತುಂಬಿ ಇಟ್ಟ ನೀರಿನ ಚಂಬು ಕ್ಷಣಾರ್ಧದಲ್ಲಿ ಖಾಲಿ! ಮತ್ತೆ ಓಡು ಆ ಬಯಲಿಗೆ ಅಥವಾ ಅಂಗಳಕ್ಕೆ. ಬೇಸಿಗೆಗಾಲದಲ್ಲಿ ಗಡಿಗೆಯಲ್ಲಿನ ನೀರನ್ನು ತೆಗೆಸಿ ತಣ್ಣನೆಯ Rasna ಮಾಡಿಸಿಕೊಳ್ಳುವುದೆಂದರೆ ಆಹಾ! ಎಂತಹ ಆನಂದ? ಅದರಲ್ಲೂ ಪಕ್ಕದಾಮನೆ Aunty ನಮ್ಮ ಮನೆಯ ಬಾಗಿಲ ಹೊಸ್ತಿಲಲ್ಲಿ ಅಮ್ಮನ ಜೊತೆ ಮಾತಾಡುತ್ತಾ ಕೂತು ಬಿಟ್ಟರು ಅಂದರೆ ಮುಗೀತು ನೋಡಿ, ಮಟ-ಮಟ ಮಧ್ಯಾಹ್ನದಲ್ಲಿ ದಿನಾಲೂ ತಪ್ಪದೇ visit ಹಾಕುವ ಆ "ಪೀಪೀ" icecream ನವ ಬಂದರೆ ಮುಗೀತು. ಅಲ್ಲಿ ಬೀದಿಯ ಕೊನೆಗೆ "ಪೀ" ಅಂತ ಒಂದು ಸಲ ಕೂಗಿ ಬಿಟ್ಟರೆ ಸಾಕು, ಶುರು ಆ ರಾ-ರದನೆ. ಮೊದುಲು ಅಮ್ಮನ ಸೀರೆ ಹಿಡಿದು ಕೇಳುವುದು "ಅಮ್ಮ, ಅಮ್ಮ ice ಕೋಡ್ಸಮ್ಮ" ಅಂತ. ಕೇಳಿದರೆ ಒಳ್ಳೆಯದು, ಒಂದು ರೂಪಾಯಿ ಏನು, 50 ಪೈಸಾಕ್ಕೆ ಸಿಗುತ್ತಿತ್ತು ಆಗ ಆ ಐಸು. ಕೇಳದಿದ್ದಲ್ಲಿ, ಗೊಳೋ ಅಂತ ಸುಂಸುಮ್ನೇ acting ಮಾಡುವುದು. ಆ ವರನಟ ಡಾ. ರಾಜಕುಮಾರನನ್ನೇ ಮೀರಿಸುವಂತಹ ನಟನೆ. ಐಸ್ ಗಾಡಿ ಹತ್ತಿರ ಬರುತ್ತಿದ್ದಂತೆ ಅದರಲ್ಲಿ ಇಣುಕಿ ನೋಡುವುದು, ಬಣ್ಣ-ಬಣ್ಣದ ಐಸುಗಳನ್ನು ನೋಡುತ್ತಿದಂತೆ ಬಾಯಿ ತುಂಬಾ ನೀರು. ಮ್ಯಾಂಗೊ ಐಸು ತಿಂದು ಮುಗಿಸುವವರೆಗೂ ಆ ನಾಲಿಗೆ ಕೆಂಪೋಗೆ ಆಗಿರ್ಬೇಕು, ಅದರಲ್ಲೂ ಬಡ್ಡಿ ಮಗಂದು competition ಬೇರೆ. ನನ್ನ ನಾಲಿಗೆ ಜಾಸ್ತಿ ಕೆಂಪೋ ನಿನ್ನದು ಕೆಂಪೋ ಎಂದು ಜಗಳ.
ಬೇಸಿಗೆಗಾಲದಲ್ಲಿ ಗೊಲಿಯಾದರೆ ಮಳೆಗಾಲದಲ್ಲಿ ಇನ್ನೊಂದು innovation. ಅದೇನದು? ಸ್ವಲ್ಪ ಯೋಚಿಸಿ, ತಲೆಗೆ ಹೊಳಿಯಿತೆ? ಕಬ್ಬಿಣದ ಸಾಲಾಖೆ ಸಿಕ್ಕಿತೆಂದರೆ ಸಾಕು, ಒಂದು ವೃತ್ತಾವೊಂದನ್ನು ಆ ಏರೆಮಣ್ಣಿನಲ್ಲಿ ಕೊರೆದು ಆ ಸಲಾಖೆಯನ್ನು ಮಣ್ಣಿನಲ್ಲಿ ಸಿಗಿಸುವುದು. ಒಟ್ಟಿನಲ್ಲಿ full timepass. ಇನ್ನೂ ಮಳೆ ರಾಯ ಶುರುವಾದನೆಂದರೆ ದಿನಕ್ಕೆ ಎರಡು-ಮೂರು ದೋಣಿ ಮಾಡಿ ನೀರಲ್ಲಿ ಸಾಗಿಸುವುದು. ನಮ್ಮ ಮನೆ ಮುಂದೆ ನಿಲ್ಲುವ ನೀರೆ ನಮಗೆ ಸಮುದ್ರ ಎಂತಹ ಪರಿಕಲ್ಪನೆ ನಮ್ಮದು ಆಗ.. ಈಗ, ಎಷ್ಟು ಕೊಟ್ಟರು ಸಾಲದು ಎನ್ನುತ್ತೀವಿ. ಮತ್ತೆ ಆ ನೀರಿನ ಬುಗ್ಗೆಗಳು, ಬುಗ್ಗೆ ತೇಲುತ್ತ ಇನ್ನೊಂದು ಬುಗ್ಗೆಯೊಂದನ್ನ ಆಕರ್ಷಿಸಿ ದೊಡ್ಡ ಬುಗ್ಗೆಯಾಗಿ ಪರಿವರ್ತಿತವಾಗಿ ತನ್ನ ಪಯಣ ಸಾಗಿಸುತ್ತಿತ್ತು, ಅದನ್ನು ಕಣ್ಣು ಪಿಳಿಕಿಸದೆ ನೋಡುತ್ತಾ ಕೂಟೆವೆಂದರೆ ಎಲ್ಲೂ ಲಕ್ಷ್ಯವೇ ಇರುತ್ತಿರಲಿಲ್ಲ. ಅಮ್ಮ ಬಂದು ಬೆನ್ನಿಗೆ ಒಂದೆರಡು ಏಟು ಹಾಕಿದಾಗಲೇ ಗೊತ್ತಾಗೋದು. ಆ ನೀರಿನ ಬೊಬ್ಬೆ ಪುಟೀತೆನ್ದರೆ full ಬೇಜಾರ್! ನೀರಿನಲ್ಲಿ ತೇಲಿ ಬಿಟ್ಟ ಆ ದೋಣಿ ಮುಳುಗೀತೆಂದರೂ ಬೀಜಾರ್!
ಇನ್ನೂ ಮಳೆರಾಯ ತನ್ನ ಕೃಪೆ ತೋರಿಸಿ ಪಾರದನೆಂದರೆ ಬಂತು ನಮ್ಮ ಗಾಳಿಪಟ. ದಿನಾಲೂ newspaper ಒಂದನ್ನು ಹುಡುಕುವುದು, ಕಸಮರಿಗೆ ಕಡ್ಡಿ ಎರಡು ತೆಗೆಯುವುದು, ಅಮ್ಮ ಅನ್ನ ಮುಗಿಸುವವರೆಗೂ ಕಾಯುವುದು (ಏನು ಮಾಡುವುದು: gum ನ ಕೊರತೆ ಇರುತ್ತಿತ್ತು.. ;-)) ಅನ್ನ ಮಾಡಿಟ್ಟ ತತ್ಕ್ಷಣ ಬಟ್ತಳೊಂದರಲ್ಲಿ ಅನ್ನ ತೆಗೆದುಕೊಂಡು ಗಾಳಿಪಟ ಮಾಡುವತ್ತ ದಿಟ್ಟ ಹೆಜ್ಜೆ.
ಇನ್ನೂ ಹಲವಾರು ಸನ್ಗತಿಗಳಿವೆ ಕೆದಕಿ ನೋಡಲಿಕ್ಕೆ, just ನಮ್ಮ ನಮ್ಮ ಬದುಕಿನ ಪಯಣದ ಕಳೆದು ಹೋದ ಹಾದೀಯತ್ತ ಸ್ವಲ್ಪ ಯೋಚಿಸಿಯರೇ ಅನ್ನಿಸುವುದಿಲ್ಲವೇ ನಿಮಗೆ, ಎಲ್ಲಿ ಹಾಳಾಗಿ ಹೋದಾವೋ "ಆ ದಿನಗಳೆಂದು".. ಛೇ, ಛೇ, ಛೇ. computer ಅಣ್ಣನ ಮುಂದೆ ಕುಳಿತುಕೊಂಡು monitor ನಲ್ಲಿ ನನ್ನ ಬಾಲ್ಯ ಕಾಣುತ್ತಲಿಹುದು ಆದರೆ ಇದು ಕನ್ನಡಿಯೊಳಗಿನ ಸಂಪತ್ತು, ಕೈಗೆ ಏಟುಕಲಾರದ ಸಂಪತ್ತು. ಆದರೆ ನಾ ಮರೆಯಲಾರೆ "ಆ ದಿನಗಳು"..
3 comments:
ಅಭಿ, ನೀನು ಹೇಳಿರೋದು ಅಕ್ಷರ ಸಹ ಸತ್ಯ.. ನಾನು ಇಂದಿಗೂ ಎಲ್ಲವನ್ನೂ ನೆನಪಿಸಿಕೊಳ್ಳುತ್ತೇನೆ.. ಇಂದಿನ ದಿನಗಳಲ್ಲಿ ನಮಗೆ (ಅದರಲ್ಲೂ ಸಾಫ್ಟ್ವೇರ್ ಇಂಜಿನಿಯರ್) ದುಡ್ಡು ಮಾಡೋದೇ ಎಲ್ಲಕ್ಕಿಂತ ಮಿಗಿಲಾಗಿದೆ.. ಇಂಥಹ ಒಂದು ದಿನ ಮತ್ತೆ ನಮ್ಮೆಲ್ಲರ ಜೀವನದಲ್ಲಿ ಬರಲೆಂದು ದೇವರಲ್ಲಿ ಪ್ರಾರ್ಥಿಸೋಣ.. ಅಂದ ಹಾಗೆ 'ಚಿನ್ನಿ ದಂಡ' ಮರೆಯಬಾರದು... ಇದನೆಲ್ಲ ನೆನಪಿಸಿಕೊಂಡು ನಮಗೂ ನೆನಪಿಸಿದಕ್ಕೆ ಧನ್ಯವಾದಗಳು [:)]
nija le....naavu cricket adoke bat illa andre lagorrrrrrrrrriiiiiiiii mathe benige hodiya chendu adtha idvi...both wer my favs in "Aa Dinagalu" :)
gud1 le abhi
ನಿಜಾ ಲೇ, ಹಾಳಿ ತಗೊಂಡು ಹಡಗಾ ಮಾಡಿ ಡೋಣ್ಯಾಗ ಬಿಡೂದು ಮತ್ತ ಪಟ ಹಾರ್ಸೋದು ಭಾರಿ ಮಜಾ ಬರ್ತಿತ್ತು...
Post a Comment